Friday, July 27, 2007

ನಕ್ಕುನಲಿ

ಮಗ : ಡ್ಯಾಡಿ, ನೀನು ಈಜಿಪ್ಟ್‌ಗೆ ಹೋಗಿದ್ಯಾ?

ಅಪ್ಪ : ಇಲ್ಲ ಕಣೋ.. ಈಜಿಪ್ಟ್‌ ಯಾವ ದಿಕ್ಕಲಿದೆಯೋ ನನಗೆ ಗೊತ್ತಿಲ್ಲ. ಅದಿರಲಿ, ಯಾಕೋ ಮಗು?

ಮಗ : ಹಾಗಾದ್ರೆ ಈ ‘ಮಮ್ಮೀ’ ನಿಮ್ಮ ಹತ್ತಿರ ಹೇಗೆ ಬಂತು?

***

ಅವಳು : ಡಾರ್ಲಿಂಗ್‌ ನಮ್ಮ ಎಂಗೇಜ್‌ಮೆಂಟಿಗೆ ರಿಂಗ್‌ ಕೊಡ್ತಿರಾ ತಾನೆ?

ಅವನು : ವೈ ನಾಟ್‌ ಡಿಯರ್‌, ನಿನ್ನ ಫೋನ್‌ ನಂಬರ್‌ ಕೊಡು ಮೊದ್ಲು

***

ಕುಡುಕನೊಬ್ಬನನ್ನು ನ್ಯಾಯಾಲಯಕ್ಕೆ ತಂದು ಕಟಕಟೆ ಏರಿಸಿದರು.

ಅಲ್ಲಿಗೆ ಬಂದ ನ್ಯಾಯಾಧೀಶರು ಇವನ ಮಾತು ಕೇಳುವ ಮೊದಲು ‘ಆರ್ಡರ್‌, ಆರ್ಡರ್‌’ ಎಂದರು. ಕೂಡಲೇ ಕುಡುಕ -‘ಸ್ವಾಮಿ ಒಂದು ಸ್ಕಾಚ್‌ ಹಾಗು ಒಂದು ಸೋಡ ಕೊಡ್ರೀ’ ಎನ್ನುವುದೇ?

***

ರಮಾ : ನಾನು ನನ್ನ ಗಂಡ ಮೊದ್ಲಿನ ಇಪ್ಪತ್ತು ವರ್ಷ ತುಂಬಾ ಸಂತೋಷವಾಗಿದ್ವಿ ನೋಡಿ.

ಪವಿತ್ರ : ಓಹೋ, ಹಾಗಾದ್ರೆ ಆಮೇಲೆ

ರಮಾ : ಆಮೇಲೇನೇ ನಾವು ಭೇಟಿಯಾದದ್ದು, ಪರಸ್ಪರ ಮದ್ವೆ ಆದದ್ದು.

***

ಪದ್ಮಕ್ಕ : ನಿಮ್ಮಪ್ಪನಿಗೆ ಎಷ್ಟು ವಯಸ್ಸೋ ಪುಟ್ಟಾ?

ಪುಟ್ಟ : ನಂಗಾದಷ್ಟೇ ನಮ್ಮಪ್ಪನಿಗೆ ವಯಸ್ಸು?

ಪದ್ಮಕ್ಕ : ಅದು ಹೇಗೋ?

ಪುಟ್ಟ : ಅಯ್ಯೋ ನಾ ಹುಟ್ಟಿದ ಮೇಲಲ್ವೇ ಅವ್ರು ಅಪ್ಪ ಆದದ್ದು..

Thursday, July 26, 2007

ಕರಿಯ ಐ ಲವ್‌ ಯೂ

ಜನಪ್ರಿಯ ಸಿನಿಮಾ ಗೀತೆಗಳನ್ನು ಕೆಡಿಸಿ, ಗಬ್ಬೆಬ್ಬಿಸುವುದರಲ್ಲಿ ನಮ್ಮ ಗುಂಡ, ನಿಜಕ್ಕೂ ನಂ.1! ‘ದುನಿಯಾ’ ಚಿತ್ರದ ಹಾಡು ಅವನ ಕೈಯಲ್ಲಿ ಈ ರೂಪ ಪಡೆದಿದೆ. ನೀವೇ ಓದಿ :

ಕರಿಯ ಐ ಲವ್‌ ಯೂ
ಈ ಬಾಟಲ್‌ ಮೇಲಾಣೆ

ಬೆಳ್ಳಿ ಐ ಲವ್‌ ಯೂ
ಈ ವಿಸ್ಕಿ ಮೇಲಾಣೆ

ನಿನಗೊಂದು ಬಾಟಲ್‌ ವಿಸ್ಕಿ
ಕುಡಿಸೋದು ನನಗಾಸೆ

ನಾನೀಗಲೇ ಟೈಟ್‌ ಆಗಿರುವೆ
ಬಿಡು ಆಸೆ... ಓ ಕೂಸೇ..

***

ರಂಗ : ನಾನು ಮದುವೆಯಾಗಿ ಸುಖವಾಗಿರೋಣ ಅಂತಿದ್ದೀನಿ.

ಗುಂಡ : ನೀನು ತುಂಬಾ ತಮಾಷೆಯಾಗಿ ಮಾತಾಡ್ತಿಯಪ್ಪ...!

***

ರಂಗ : ನಿನ್ನ ಹೆಂಡತಿಯನ್ನು ಬೆಳಗ್ಗೆ ವಾಕಿಂಗ್‌ಗೆ ಕರಕೊಂಡು ಬರಬಹುದು ಅಲ್ವಾ?

ಗುಂಡ : ಒಂದು ಅರ್ಧ ಗಂಟೆ ನನಗೆ ಸ್ವಾತಂತ್ರ್ಯ ಸಿಕ್ಕಿದರೂ, ನಿನಗೆ ಸಹಿಸೋದಕ್ಕೆ ಆಗೋದಿಲ್ವಾ? ನೀನು ನನ್‌ ಫ್ರೆಂಡ್‌ ಅಲ್ಲ.. ವೈರಿ..

Sharif's lyric

ಎಲ್ಲವರಂತವನಲ್ಲ ನನ ಗಂಡ
ಬಲ್ಲಿದನು ಪುಂಡ
ಎಲ್ಲವರಂತವನಲ್ಲ ಕೇಳೆ
ಸಣ್ಣು ಸಣ್ಣಿಗೆ ಬೈದು ನನ್ನ
ಎಲ್ಲು ಹೋಗದ ಹಾಂಗ ಮಾಡಿಟ್ಟ
ಕಾಲ್ ಮುರಿದು ಬಿಟ್ಟ

ತುಂಟ ಸವತಿಯ ಸೊಂಟ ಮುರಿ ಹೊಡೆದ
ಒಣ ಪಂಟ ಮಾತಿನ ಗಂಟುಗಳ್ಳರ ಮನೆಗೆ ಬರಗೊಡದ
ಕುಂಟ ಕುರುಡರೆಂಟು ಮಂದಿ ಗಂಟು ಬಿಟ್ಟರೆ
ಅವರ ಕಾಣುತ್ತ ಗಂಟಲಕ್ಕೆ ಗಾಣಾದ ಮೇಲಕ್ಕ ತಕ್ಕವನೆ ಸಿಕ್ಕ

ಅತ್ತೆ ಮಾವರ ಮನೆಯ ಬಿಡಿಸಿದನೆ
ಮತ್ತಲ್ಲಿ ಮೂವರ ಮಕ್ಕಳೈವರ ಮಮತೆ ಕೆಡಿಸಿದನೆ
ಎತ್ತ ಹೋಗದೆ ಕಿತ್ತಬಗಲದೆ ಗೊತ್ತಿನಲ್ಲೆ ಇಟ್ಟು ನನ್ನನು
ಮುತ್ತಿನ ಮೂಗುತಿಯ ಕೊಟ್ಟಾನೆ ಅವನೇನು ದಿಟ್ಟನೆ

ಕಾಂತೆ ಕೇಳೆ ಕರುಣ ಗುಣದಿಂದ
ಎನಗಿಂತ ಪುರುಷನು ಬಂದು ದೊರಕಿದ
ಪುಣ್ಯ ಫಲದಿಂದ
ಕಾಂತೆ ಬಾರೆಂತೆಂದು ಕರೆದೆ ಕಾಂತ ಮಂದಿರದೊಳಕೆ ಒಯ್ದು
ಭ್ರಾಂತಿ ಭವದುರಿತವನು ಹರಿಸಿದನೆ ಶಿಶುನಾಳದೀಶ